ಓಮಿನಿ, ಈ ಶಬ್ದ ಹೆಚ್ಚು ಜನಪ್ರಿಯವಾಗಿದ್ದು ಮಾರುತಿ ಸುಜುಕಿ ಕಂಪನಿಯ ಓಮಿನಿ ಕಾರಿನಿಂದ. ಆದರೆ ಓಮಿನಿ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಎಲ್ಲಾ ಎಂದರ್ಥ ಆದರೆ, ಈಗ ಅದೇ ಹೆಸರಿನ ಚಿತ್ರವೊಂದು ಸದ್ದಿಲ್ಲದೆ ಟ್ರೈಲರ್ ಬಿಡುಗಡೆಗೆ ಮಾಡಿದೆ .
ಇದೇ ರವಿವಾರ ನಡೆದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇದೇ ವೇಳೆ ಮಾತನಾಡಿದ ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳಳುತ್ತಿರುವ ಸಿದ್ದು ಮೂಲಿಮನಿ ಚಿತ್ರದ ಬಗ್ಗೆ.. ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು ಈ ಚಿತ್ರದಲ್ಲಿ ಹಾರರ್, ಕಾಮಿಡಿ, ಲವ್ ಎಲ್ಲವೂ ಇದೆ ಎಂದು ಹಂಚಿಕೊಂಡರು. ಮತ್ತು ಅದ್ದೂರಿಯಾಗಿ ಬಿಡುಗಡೆ ಆಗ್ತಾ ಇರೋ ವಿಕ್ರಾಂತ ರೋಣ ಚಿತ್ರದಲ್ಲು ಸಿದ್ದು "ಮುನ್ನ" ಎಂಬ ಪಾತ್ರದಲ್ಲಿ ಪನ್ನಾ (ನೀತಾ ಅಶೋಕ್ ಸಹೋದರನಾಗಿ) ನಟಿಸಿದ್ದಾರೆ
ಓಮಿನಿ ಚಿತ್ರಕ್ಕೆ ಮಂಜು ಹೆದ್ದೂರು ರವರು ಕಥೆ ಬರೆದು ನಿರ್ದೇಶನ ಮಾಡಿದ್ದು.. ಎಂ.ಬಿ.ಹಳ್ಳಿಕಟ್ಟಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅರ್ಜುನ್ ರಾಮು ಸಂಗೀತ ಸಂಯೋಜನೆ ಮಾಡಿದ್ದಾರೆ, ಮತ್ತು ಬೆಳ್ಳುಡಿ ಫಿಲಂಸ್ ಹಾಗೂ ಎಸ್.ಆರ್.ಫಿಲಂಸ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.
ಪೂಜಾ ಜನಾರ್ದನ್, ಭರತ್ ಬೋಪಣ್ಣ, ಮಂಜು ಹೆದ್ದೂರು, ಆಕಾಂಕ್ಷಾ ಪಟ್ಟಿಮಕ್ಕಿ, ದಿ || ಮೋಹನ್ ಜುನೇಜಾ, ಪ್ರಕಾಶ್ ತುಮ್ಮಿನಾಡ್, ಮನಸ್ವಿತ್ ಸೇರಿದಂತೆ ಮುಂತಾದವರು ತಾರಬಳಗದಲ್ಲಿದ್ದಾರೆ.
ಹೆಚ್ಚಿನ ಮಾಹಿತಿಗೆ ನಮ್ಮ ಸ್ಯಾಂಡಲ್ ವುಡ್ ಮೇನಿಯಾ ಫಾಲೋ ಮಾಡೋಕೆ ಮರಿಬೇಡಿ.
Follow me on -
Youtube: https://www.youtube.com/channel/UC6e5HUxTM-WrR3KJoRDp8bg
Facebook: https://www.facebook.com/sandalwoodmania1
Instagram: https://www.instagram.com/rkcreatiions
Twitter: https://twitter.com/sandalwood_Off
#SandalwoodMania #Sandalwood #KFI #Omini #Karantaka #HomeMinister #Trending #Kannada