ಸಿನಿ ಪ್ರೇಕ್ಷಕರು ಅತೀ ಕಾತುರದಿಂದ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಜುಲೈ 28ರಂದು ಈ ಚಿತ್ರ ಅದ್ದೂರಿಯಾಗಿ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ. ಚಿತ್ರ ತೆರೆಕಾಣಲು ಕೇವಲ 8 ದಿನಗಳು ಬಾಕಿ ಉಳಿದಿದೆ. ಸದ್ಯ ಚಿತ್ರ ತಂಡ ಜೋರಾಗಿ ಪ್ರಚಾರ ಮಾಡುತ್ತಿದೆ. ಅಭಿನಯ ಚಕ್ರವರ್ತಿ ಅಭಿಮಾನಿಗಳು ಕೂಡ ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ದೊಡ್ಡ ಬಜೆಟ್ನಲ್ಲಿ ಸಿನಿಮಾ ಸಿದ್ಧವಾಗಿದ್ದು. ಅದಕ್ಕೆ ತಕ್ಕಂತೆಯೇ ಹೈಪ್ ಸಹ ಸೃಷ್ಟಿ ಆಗಿದೆ. ಈಗ ಕಿಚ್ಚನ ಫೋಟೋ, ಟಿ-ಶರ್ಟ್, ಜಾಕೆಟ್, ನೋಟ್ ಪ್ಯಾಡ್ ಮತ್ತು ‘ವಿಕ್ರಾಂತ್ ರೋಣ’ ಸಿನಿಮಾ ಟೈಟಲ್ ಇರುವ ಕಾಫಿ ಮಗ್, ಮುಂತಾದ ವಸ್ತುಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಸ್ವತಃ ತಮ್ಮ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಭಿಮಾನಿಗಳು ಹಾಗೂ ಸಿನಿ ಪ್ರೇಕ್ಷಕರು ಬಯಸಿದಂತೆ ಚಿತ್ರ ತಂಡದಿಂದ ಪ್ರತಿ ದಿನ ಹೊಸ ಹೊಸ ಅಪ್ಡೇಟ್ ಬರುತ್ತಿದೆ. ವಿಶೇಷವಾಗಿ ಇಂದು ಚಿತ್ರ ತಂಡದಿಂದ ಹೊರಬಂದ ಅಪ್ ಡೇಟ್ ಏನೆಂದರೆ ವಿಕ್ರಾಂತ ರೋಣ ಟೈಟಲ್ ಪ್ರಿಂಟ್ ಮಾಡಲಾಗಿರುವ ಕಾಫಿ ಮಗ್, ಟಿ-ಶರ್ಟ್, ಜಾಕೆಟ್, ನೋಟ್ ಪ್ಯಾಡ್ ಸೇರಿದಂತೆ ಹಲವು ವಸ್ತುಗಳು ಲಭ್ಯವಿದೆ ಎಂದು ಹೇಳಿದ್ದಾರೆ ಜೊತೆಗೆ ಅಭಿಮಾನಿಗಳನ್ನು ಈ ಡ್ರೆಸ್ ನಲ್ಲಿ ನೋಡಬಯಸುತ್ತೇನೆ ಎಂದು ಅದರ ಆಫೀಶಿಯಲ್ ಲಿಂಕ್ ಹಂಚಿಕೊಂಡಿದ್ದಾರೆ.
ಅನೂಪ್ ಭಂಡಾರಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ಅವರು ಬಂಡವಾಳ ಹೂಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
For more information and exclusive updates
Follow me on -
Youtube: https://www.youtube.com/channel/UC6e5HUxTM-WrR3KJoRDp8bg
Facebook: https://www.facebook.com/sandalwoodmania1
Instagram: https://www.instagram.com/rkcreatiions
Twitter: https://twitter.com/sandalwood_Off
Dailyhunt: https://profile.dailyhunt.in/sandalwoodmania
#vikrantrona #merchandise #VRin3D #VRonJuly28 #KICHCHAVERSE #NFT #KichchaSudeepa #Kiccha #sudeep #Kannada #karnataka #share #sandalwood #KFI